ತೋಕೆ ಗೋಧಿ ಅಥವಾ ಓಟ್ಸ್ (ಅವೀನಾ ಸಟೀವಾ) ಅದೇ ಹೆಸರಿನಿಂದ ಪರಿಚಿತವಾಗಿರುವ ಅದರ ಬೀಜಕ್ಕಾಗಿ ಬೆಳೆಯಲಾಗುವ ಸೀರಿಯಲ್‍ನ ಒಂದು ಪ್ರಜಾತಿ. ತೋಕೆ ಗೋಧಿಯು ಓಟ್‍ಮೀಲ್ ಮತ್ತು ಚಪ್ಪಟೆ ತೋಕೆ ಗೋಧಿಯಾಗಿ ಮಾನವ ಸೇವನೆಗೆ ಸೂಕ್ತವಾಗಿದೆಯಾದರೂ, ಜಾನುವಾರುಗಳ ಮೇವಾಗಿ ಬಳಕೆ ಅದರ ಅತ್ಯಂತ ಸಾಮಾನ್ಯ ಬಳಕೆಗಳಲ್ಲಿ ಒಂದು. ಹೆಕ್ಸಪ್ಲಾಯಿಡ್ ಕಾಡು ತೋಕೆ ಗೋಧಿ ಸ್ಟರೀಲಿಸ್ ಅವೀನಾ ಸಟೀವಾ ಮತ್ತು ನಿಕಟವಾಗಿ ಸಂಬಂಧಿಸಿದ ಕಿರು ಬೆಳೆ ಅವೀನಾ ಬಿಜ಼ಂಟಿನಾದ ಕಾಡು ಪೂರ್ವಜವಾಗಿದೆ. ಇದು ಒಂದು ಏಕದಳ ಧಾನ್ಯವಾಗಿದ್ದು ಮನುಷ್ಯರು ಸೇವಿಸಲು ಯೋಗ್ಯವಾದ ಆಹಾರವಾಗಿದ್ದು , ದನಕರುಗಳು, ಕುದುರೆಗಳು ಮುಂತಾದ ಪಶುಗಳ ಆಹಾರವಾಗಿ ಪ್ರಮುಖವಾಗಿ ಬಳಕೆಯಾಗುತ್ತಿದೆ.ಯುರೋಪ್ , ಅಮೇರಿಕ , ರಶಿಯ , ಚೀನಾಗಳಲ್ಲಿ ಇದನ್ನು ಬೆಳೆಸುತ್ತಾರೆ.ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಗುಣಕ್ಕಾಗಿ ಇದನ್ನು ಆರೋಗ್ಯಕರ ಪೌಷ್ಟಿಕ ಆಹಾರ ಎಂದು ಪರಿಗಣಿಸಲಾಗುತ್ತಿದೆ. == ಉತ್ಪಾದನೆ == == ಉಲ್ಲೇಖಗಳು ==